ದುಷ್ಟರಿಗೆ ಮಾಲಾಶ್ರೀ ಮಾರಕಾಸ್ತ್ರ ರೇಟಿಂಗ್: 3.5/5 ****
Posted date: 14 Sat, Oct 2023 05:30:28 PM
ಗುಪ್ತನಿಧಿಯನ್ನು ತನ್ನದಾಗಿಸಿಕೊಳ್ಳಬೇಕೆನ್ನುವ  ಪ್ರಯತ್ನದಲ್ಲಿ ಖಳನಾಯಕನ ಪಾತ್ರಧಾರಿ  ಅಯ್ಯಪ್ಪ ಶರ್ಮ ನಡೆಸುವ ನಾನಾ ಕಸರತ್ತುಗಳು, ಅದರ ಸುತ್ತ ನಡೆಯುವ ಘಟನೆಗಳು, ಬರುವ ಪಾತ್ರಗಳ  ಕಥೆಯೇ‌ ಮಾರಕಾಸ್ತ್ರ. ಪೊಲೀಸ್ ಇಲಾಖೆ, ರಾಜಕೀಯದಲ್ಲಿ  ಸಾಕಷ್ಟು ಪ್ರಭಾವ ಹೊಂದಿರುವ ಈತನಿಗೆ ಈತನ ಸುತ್ತ ಬರುವ ಒಂದಷ್ಟು ಪಾತ್ರಗಳೇ ಮಾರಕಾಸ್ತ್ರ ಚಿತ್ರದ ಮೇನ್ ಪಿಲ್ಲರ್‌ಗಳು, ಚಿತ್ರದ ಬಹುತೇಕ ಕಥೆ ನಡೆಯುವುದು ಬಿಸಿಲನಾಡು‌ ಬಳ್ಳಾರಿ ನಗರದ  ಸುತ್ತಮುತ್ತ. ಚಿತ್ರದ ನಾಯಕ ಭರತ್( ಆನಂದ್ ಆರ್ಯ), ವೃದ್ದಾಶ್ರಮದಲ್ಲಿ ಒಂದಷ್ಟು ಹಿರಿ ಜೀವಗಳಿಗೆ ಆಸರೆಯಾಗುತ್ತ, ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುತ್ತಾನೆ, ಟಿವಿ ಕ್ರೈಂ ರಿಪೋರ್ಟರ್  ನಂದಿನಿ (ಹರ್ಷಿಕಾ ಪೂಣಚ್ಚ) ನಾಯಕಿ, ಏನೋ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿ ಹಾಕಿಕೊಂಡಾಗ ಇದೇ ಭರತ್ ಬಂದು ಕಾಪಾಡಬೇಕಾಗುತ್ತದೆ. ಆತನ ಗುಣ, ನಡವಳಿಕೆಗೆ ಮನಸೋಲುವ ನಂದಿನಿ ಆತನನ್ನು ಲವ್ ಮಾಡುತ್ತಾಳೆ,  ಪ್ರೊಫೆಸರ್ ಶಂಕರ್( ನಟರಾಜ್)  ಒಬ್ಬ ದೇಶಭಕ್ತ, ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಅನಾಥ ಹುಡುಗನೊಬ್ಬನನ್ನು ಕರೆತಂದು ಸ್ವಂತ ಮಗನ ಹಾಗೇ ಸಾಕಿರುತ್ತಾರೆ. ಆತನೇ ಡ್ಯಾನಿಯಲ್ (ಉಗ್ರಂ ಮಂಜು). ಒಂದು ಸಂದರ್ಭದಲ್ಲಿ ಶಂಕರ್, ಭರತ್ ಭೇಟಿಯಾದಾಗ ಇಬ್ಬರ ನಡುವೆ ಸ್ನೇಹ, ವಿಶ್ವಾಸ ಬೆಳೆಯುತ್ತದೆ,  ಶಂಕರ್ ದತ್ತುಪುತ್ರ ಡ್ಯಾನಿಯಲ್ ವಿದೇಶದಲ್ಲಿರುವ ಸಂದರ್ಭದಲ್ಲಿ,  ಶಂಕರ್ ಅವರ ಇಬ್ಬರು ಹೆಣ್ಣು ಮಕ್ಕಳ ಕೊಲೆಯಾಗುತ್ತದೆ, ಆ ಕೊಲೆಯನ್ನು  ಶಂಕರ್ ದಂಪತಿಗಳೇ ಮಾಡಿದರೆಂಬ  ಆರೋಪದ  ಮೇಲೆ  ಅವರಿಬ್ಬರೂ ಅರೆಸ್ಟ್ ಆಗುತ್ತಾರೆ,   ವಿದೇಶದಿಂದ ವಾಪಸ್ ಬರುವ  ಡ್ಯಾನಿಯಲ್ ತನ್ನ ತಂದೆಯ ವಿರುದ್ದ ಪಿತೂರಿ ನಡೆಸಿದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ಡಾಕ್ಟರ್, ಡಿಸಿ, ಲಾಯರ್, ಎಸ್.ಐ.ಮಂಜುನಾಥ್  ಹೀಗೆ ನಾಲ್ಕು ಜನರನ್ನು ಕೊಲೆ ಮಾಡುತ್ತಾನೆ, ನಂತರ ಶಾಸಕನನ್ನು   ಕೊಲೆ ಮಾಡಲು  ಪ್ರಯತ್ನಿಸಿ ಜಾಹ್ನವಿ (ಮಾಲಾಶ್ರೀ) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ, ಇದಕ್ಕೂ ಮೊದಲು ಕೊಲೆಯಾದ ನಾಲ್ಕೂ ಜಾಗಗಳ  ಸಿಸಿ ಟಿವಿ ದೃಶ್ಯಗಳಲ್ಲಿ ಕೊಲೆ ನಡೆದ ವ್ಯಕ್ತಿಗಳ ಬಳಿ ಭರತ್ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ಅನುಮಾನದಿಂದ   ಭರತ್‌ನನ್ನು ಕರೆದು ವಿಚಾರಿಸಿದಾಗ  ಆತನ ಪಾತ್ರ ಇಲ್ಲವೆಂಬುದು ಗೊತ್ತಾಗುತ್ತದೆ, 
 
ಶಂಕರ್ ಮಾವ ತನ್ನೆಲ್ಲ ಆಸ್ತಿಯನ್ನು ಶಂಕರ್ ಪತ್ನಿ ಪಾರ್ವತಿಗೇ ಬರೆದ ಕಾರಣ, ಆತನ ಮಗ(ಅಯ್ಯಪ್ಪ ಶರ್ಮ) ಶಂಕರ್ ದಂಪತಿಯನ್ನು ಹತ್ಯೆಗೈದಾದರೂ ಆಸ್ತಿಯನ್ನು ತನ್ನ ಕೈವಶ  ಮಾಡಿಕೊಳ್ಳಬೇಕೆಂದು  ಬ್ಲಾಕ್ ಮ್ಯಾಜಿಕ್ ಮಾಡುವವರ ನೆರವು ಪಡೆಯುತ್ತಾನೆ. ಆ ಮೂಲಕ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವ  ಶಂಕರ್, ಪಾರ್ವತಿ ದಂಪತಿಗಳಿಬ್ಬರೂ  ಪರಸ್ಪರ ಹೊಡೆದಾಡಿಕೊಂಡು ಸಾಯಬೇಕೆಂದು  ವಾಮಾಚಾರ ಮಾಡಿಸುತ್ತಾನೆ, ಆದರೆ ಅದೇ ಸಮಯಕ್ಕೆ ಆಸ್ಪತ್ರೆಗೆ ಬಂದ ಜಾಹ್ನವಿ,  ಅನಾಹುತವನ್ನು  ತಪ್ಪಿಸುತ್ತಾಳೆ, ಮಕ್ಕಳ ಕೊಲೆ  ಆರೋಪ ಹೊತ್ತ ಶಂಕರ್ ಪಾರ್ವತಿ ದಂಪತಿಗಳು ನಿರಪರಾಧಿಗಳೆಂದು ಕೋರ್ಟ್ನಲ್ಲಿ ಪ್ರೂವ್ ಆಯ್ತಾ, ಇಲ್ವಾ ಎನ್ನುವುದೇ  ಕ್ಲೈಮ್ಯಾಕ್ಸ್, ಸಾಕಷ್ಟು  ಟ್ವಿಸ್ಟ್, ಟರ್ನ್ಗಳನ್ನು ಹೊಂದಿರುವ ಈ ಚಿತ್ರದಲ್ಲಿ  ಹೆಚ್ಚು ಪಾತ್ರಗಳು ಬಂದು ಪ್ರೇಕ್ಷಕ ಗೊಂದಲಕ್ಕೀಡಾಗುತ್ತಾನೆ. ಉಳಿದಂತೆ ಚಿತ್ರದ ಹಿನ್ನೆಲೆ ಸಂಗೀತ, ಹಾಡುಗಳು ಜೊತೆಗೆ ಅವುಗಳ ಕ್ಯಾಮೆರಾ ವರ್ಕ್ ಚೆನ್ನಾಗಿದೆ. ಬಹಳ ದಿನಗಳ ನಂತರ ಬಣ್ಣ ಹಚ್ಚಿರುವ  ಮಾಲಾಶ್ರೀ ಪೋಲೀಸ್ ಗೆಟಪ್ನಲ್ಲಿ ಖಡಕ್ ಅಭಿನಯ ನೀಡಿದ್ದಾರೆ, ಆನಂದ್ ಆರ್ಯ ನೋಡಲು ಪುನೀತ್‌ರಂತೇ ಕಂಡು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ,  ಸಾಯಿಕುಮಾರ್ ಸಹೋದರ ಅಯ್ಯಪ್ಪ ಶರ್ಮ ರಗಡ್ ಅಭಿನಯದ ಮೂಲಕವೇ ನೋಡುಗರ ಮನ  ಗೆಲ್ಲುತ್ತಾರೆ, ನಿರ್ಮಾಪಕ ನಟರಾಜ್ ಪೊಫೆಸರ್ ಶಂಕರ್ ಪಾತ್ರದಲ್ಲಿ  ಗಮನ ಸೆಳೆಯುತ್ತಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed